Thursday, June 3, 2010

Chennaiನಲ್ಲಿ ಒಂದು ಸಂಜೆ

ನಾನು ಆಗ ಚೆನ್ನೈ ನಲ್ಲಿ ಕೆಲಸ ಮಾಡ್ತಿದ್ದೆ.ಹೀಗೆ ಒಂದು ದಿನ ಬೆಆಚ್ ಗೆ ಅಂತ ಹೋದ್ವಿ.ಅಲ್ಲಿ ಎಷ್ಟೋ ಜನ ಬಂದಿದ್ರು ಎಲ್ಲರೂ ತಮ್ಮದೇ ಲೋಕದಲ್ಲಿ ಇದ್ರು . ನಾನು ನನ್ನ ಫ್ರೆಂಡ್ ಜೊತೆ ಹೋಗಿದ್ದೆ ಅವನ ವಿಷ್ಯ ಇನ್ನೊಮ್ಮೆ ಮಾತಾಡೋಣ.ನಾನು ಅವನು ಹೀಗೆ ಏನೋ ಮಾತಾಡಿಕೊಂಡು ಬರ್ತಾ ಇದ್ವಿ .ಅಲ್ಲೇ ಒಂದು ಫಾರಿನ್ ಜೋಡಿ ನಮ್ಮ ನೋಡಿ "nice pair " ಅಂದ್ರು.ನಮಗಿಬ್ಬರಿಗೂ ನಗು.ಅವರು ಪ್ಲೀಸ್ ಒಂದೇ ಒಂದು ಫೋಟೋ ತೋಗೊತಿವಿ ಪ್ಲೀಸ್ ಅಂದ್ರು.ನಾನು ಅದಕ್ಕೆ ಬೇಡ ಚೆನ್ನಾಗಿರಲ್ಲ ಅಂತ ಅಂದೆ.ಆದರೆ ಅವರು ಬಿಡಲೇ ಇಲ್ಲ .ತುಂಬ ಒತ್ತಾಯ ಮಾಡಿದ್ರು .ನನ್ನ ಹುಡುಗನೂ ಚ್ಹೆ! ಇದೊಳ್ಳೆ ಪಜೀತಿಗೆ ಬಂತಲ್ಲಪ್ಪ ಅಂತ ಯೋಚಿಸತೊಡಗಿದ ಸರಿ ಇವರು ಇನ್ನು ಬಿಡಲಾರರು ಅಂತ ಗೊತ್ಹಾದ ಮೇಲೆ ನಾವಿಬ್ಬರೂ ಅಲ್ಲೇ ಒಂದು ಕಡೆ ಫೋಟೋ ಗೆ pose ಕೊಡಲು ನಿಂತೆವು . ಅವರು ಹೇಗೆ ಹೇಗೋ ಒಂದೆರಡು ಫೋಟೋ ತೆಗೆದರು.ಅಲ್ಲೇ ಓಡಾಡುತಿದ್ದ ಒಬ್ಬ ಸಣ್ಣ ಹುಡುಗ ಹತ್ತಿರ ಓಡಿ ಬಂದು ಅಣ್ಣ ಹೂ ತೊಗೋ ಅಣ್ಣ ದಯವಿಟ್ಟು ಬೇಡ ಅನ್ಬೇಡ ಅಕ್ಕನಿಗೆ ಹೂ ಕೊಡಿಸು ಎಷ್ಟು ಚೆನ್ನಾಗಿ ಕಾಣ್ತಾರೆ ಅಕ್ಕ ಅಂತ ದೊಮ್ಬಾಲು ಬಿದ್ದ.ನನ್ನ ಗೆಳೆಯ ಬೇಕಾ ಅಂತ ನನ್ನ ಕೇಳಿದ. ನಾನು ಅಯ್ಯೋ ದೇವರೇ ಈಗ ಈ ರಾತ್ರಿಯಲ್ಲಿ ಹೂ ಮುಡ್ಕೊಂಡು ಏನ್ ಮಾಡೋದು.ಬೇಡ ಅಂದೆ.ಹೆಚ್ಚಾಗಿ ನನಗೆ ಮೊದಲಿಂದಲೂ ಹೂ ಎಲ್ಲಾ ಅಷ್ಟೊಂದು ಇಷ್ಟ ಇಲ್ಲ.ಅಂದ್ರೆ ಅದನ್ನ ಸುಮ್ಮನೆ ದಿನಾಗ್ಲು ಮಾಡ್ಕೊಳ್ಳೋದು ಅಂದ್ರೆ ಆಗಲ್ಲ. ಆ ಹುಡುಗ ಬಿಡ್ತಾನೆ ಇಲ್ಲ. ಪ್ಲೀಸ್ ಅಣ್ಣ ಮೊದಲ ಬೋಣಿ ನಿಮ್ದೆ, ಅವಾಗ್ಲಿಂದ ಯಾರು ತೊಗೊಂಡಿಲ್ಲ ಅಣ್ಣ ಇಲ್ಲ ಅನ್ಬೇಡಿ ಅನ್ನೋ ರಾಗ.ಅಯ್ಯೋ ಇದೇನಪ್ಪ ಇವತ್ತು ಅಂತ ಅನಿಸ್ತು .ಸರಿ ಎಷ್ಟಪ್ಪ ಅಂದ್ರೆ 15Rs ಒಂದು ಮಳ ಅಂದ.ಹೇಯ್! ಏನ್ ಆಟಾಡ್ತಾ ಇದ್ದೀಯ ?ಏನು ಬೇಡ ಹೋಗು ಅಂದ್ರೆ ಮತ್ತೆ ಪ್ಲೀಸ್ ಅಣ್ಣ ಹಂಗನ್ನಬೇಡಿ ಒಂದೇ ಒಂದು ಮಳ ತೊಗೊಳ್ಳಿ ಪ್ಲೀಸ್ ಮತ್ತೆ ಶುರು.ಯಾಕೋ ಹೀಗೆ ತಲೆ ತಿಂತೀಯ?ನಮಗೆ ಹೂ ಬೇಡಪ್ಪ ಅಂದ್ರು ಕೇಳ್ತಾನೆ ಇಲ್ಲ.ಅಮ್ಮನಿಗೆ ಹುಷಾರಿಲ್ಲ, ತಂಗಿ ಮನೇಲಿ ಇದ್ದಾಳೆ. ಊಟಬೇರೆ ಮಾಡಿಲ್ಲ ಅನ್ನೋ ಸೆಂಟಿಮೆಂಟ್ ಡೈಲಾಗ್ ಗಳು ಬೇರೆ .ನನ್ನ ಗೆಳೆಯನಿಗೆ ಇವೆಲ್ಲ ಸುಳು ಅಂತ ಅನಿಸ್ತು.ಏಹಿ ನಡೆಯೋ ನಿಮ್ ಮನೆಗೆ ಎಲ್ಲೋ ಇದಾರೆ ನಿಮಮ್ಮ.ಹೇಗೆ ಚಿಕ್ಕ ಮಕ್ಳನ್ನ ಮುದೇ ಬಿಟ್ಟು ದುಡಿಸ್ಕೊತಾರ ಯಾರಾದ್ರು?ಸುಳ್ಳು ಹೇಳ್ತೀಯ ಅಂತ ಗದರಿದ.ಅವನು ಇಲ್ಲ ಸರ್ ನಿಜವಾಗಿಯೂ ಅಂದ.ಸರಿ ನಡಿ ನಿಮ್ಮ ಮನೆಗೆ ಹೋಗಣ ಅಂತ ಆ ಹುಡುಗನನ್ನು ಕರೆದುಕೊಂದು ಹೋರಾಟ.ನಾನು ಇದೇನೋ ಹೋಗ್ಲಿ ಬಿಡೋ ಅಂದೆ ಅವನು ಇರು ಶ್ರುತಿ ಇಂತಹವರನ್ನು ಹೀಗೆ ಬಿಡಬಾರದು.ಎಷ್ಟು ಚಿಕ್ಕ ವಯಸ್ಸಿಗೇ ಸುಳ್ಳು ಹೇಳೋದು ನೋಡು ಅಂತ ಅಂದು ಅವನ್ ಜೊತೆ ನಡೆದ.ನಾನು ಅವರಿಬ್ಬರನ್ನು ಹಿಂಬಾಲಿಸಿದೆ. ಅವನು ನಿಜವಾಗಿಯೂ ತನ್ನ ಮನೆಗೆ ಕರೆದು ಕೊಂಡು ಹೋದ.ಅದು ಮನೆಯೋ ಅಥವಾ ಅದು ಒಂದು ಗೊಹೆಯೋ ಅಂತ ಕನ್ಫ್ಯೂಸ್ ಆಗೋವಷ್ಟು ಕಿರಿದಾಗಿತ್ತು ಆ ಮನೆ. ಒಬ್ಬ ೫ ಅಡಿ ಮನುಷ್ಯ ತಲೆ ಎತ್ತಿ ನಿಲ್ಲೋಕೆ ಸಾದ್ಯ ಇರಲ್ಲಿಲ.ಅಲ್ಲಿ ಒಂದು ಕಡೆ ಆ ಹುಡುಗನ ಅಮ್ಮ ಮಲಗಿದ್ಲು.ಬರೀ ಮೂಲೆಯ ಚಕ್ಕಳ ಅವಳು.ನೋಡಿದರೆ ಎಂತಹವರಿಗೂ ಕರುಣೆ ಬರುವಂತಿತ್ತು ಅವಳ ಸ್ಥಿತಿ.ಬಯ್ಯುವುದಿರಲಿ ಅವಳನ್ನ ಮಾತಾಡಿಸುವುದೂ ಮರೆತು ಹೋಗಿತ್ತು ನಮಗೆ. ಅವಳ ಮಗ ಅವಳ ಹತ್ತಿರ ಹೋಗಿ ಅದೇನೂ ಹೇಳಿದ ಅವಳು ಕ್ಷಮಿಸಿಬಿಡಿ ಅವನು ಇನ್ನು ಚಿಕ್ಕವನು ಅವನಿಗೆ ಮಾತನಾಡಲು ಬರುವುದಿಲ್ಲ ಅಂತ ಶುರು ಮಾಡಿದಳು.ತನಗೆ ಏಳಲು ಆಗದಿರುವುದಕ್ಕೆ ಕ್ಷಮೆಯಾಚಿಸಿದಳು.ಅವಳ ಒಂದು ಕಿದ್ನೆಯ್ ಅನ್ನು ಅವಳ ಮಗನಿಗೆ ಕೊಟ್ಟಿರುವುದಾಗಿಯೂ ಅವಳ ಇನ್ನೊದು ಪೂರ್ತಿ ಹಾಲಾಗಿರುವುದಾಗಿಯೂ ಅಂದಳು.ಗಂಡ ಮಕ್ಕಲಾಗೊವರೆಗೂ ಇದ್ದು ಈಗ ಅವಳ ಸ್ಥಿತಿ ನೋಡಲಾರದೆ ಅವಳನ್ನು ಸಾಕಲಾರದೆ ಅವಳನ್ನು ಬಿಟ್ಟು ಹೋದ ಅಂತ ಅಂದಳು.ಚಿಕ್ಕ ಮಗುವಿಗೆ ಕಾಲೆರ ಬಂದಿರುವುದಾಗಿಯೂ ಅದು ತನ್ನ ಕೈಯಿ ಬಿದುತದ್ದೆ ಅಂತ ಗೊತಿದ್ದೂ ಅವಳು ಅದನ್ನ ಬಹಳ ಆಸೆ ಇಂದ ನೋಡಿಕೊಲ್ಲುತಲಿದ್ದಳು.ಅವಳ ಒಂದು ಕಿಡ್ನಿಯನ್ನ ಅವಳ ಮಗನಿಗೆ ಕೊಟ್ಟಿರುವುದಾಗಿಯೂ ಅವಳ ಇನ್ನೊಂದು ಪೂರ್ತಿ ಹಾಳಾಗಿರುವುದಾಗಿಯೂ ಅಂದಳು.ಗಂಡ ಮಕ್ಕಳಾಗೊವರೆಗೂ ಇದ್ದು ಈಗ ಅವಳ ಸ್ಥಿತಿ ನೋಡಲಾರದೆ ಅವಳನ್ನು ಸಾಕಲಾರದೆ ಅವಳನ್ನು ಬಿಟ್ಟು ಹೋದ ಅಂತ ಅಂದಳು.ಚಿಕ್ಕ ಮಗುವಿಗೆ ಕಾಲರ ಬಂದಿರುವುದಾಗಿಯೂ ಅದು ತನ್ನ ಕೈಯಿ ಬಿಡುತದ್ದೆ ಅಂತ ಗೊತಿದ್ದೂ ಅವಳು ಅದನ್ನ ಬಹಳ ಆಸೆ ಇಂದ ನೋಡಿಕೊಳ್ಳುತಲಿದ್ದಳು.ಅವಳಿಗೆ ತಾನು ಮಲಗಿದಲಿಂದ ಈಳಲೂ ಆಗುತಿರಲಿಲ್ಲ.ಇಂತಹ ಸ್ಥಿತಿಯಲ್ಲಿ ಅವಳ ಮಗ ಇನ್ನು ೭ ವರ್ಷದ ಕಿಸೋರ ಎಲ್ಲಾ ತಾನೇ ಮಾಡ್ತೀನಿ ಅಂತ ಅಮ್ಮನಿಗೆ ಸಮಾದಾನ ಹೇಳಿ ಹೂ ಮಾರಲು ಹೋಗುತಿದ್ದ.ಅವನು ಮಾರದೆ ಹಾಗೆ ತಂದರೆ ಅಮ್ಮ ಏನೂ ಬೈಯ್ಯುತಿರಲಿಲ್ಲ ಆದ್ರೆ ಅವನ ಅಮ್ಮನಿಗೆ ಮತ್ತೆ ತಂಗಿಗೆ ಊಟ ಇರುತ್ತಿರಲಿಲ್ಲ.ಯಾಕೋ ಮನಸ್ಸಿಗೆ ತುಂಬ ಬೀಜಾರಾಯಿತು.ಹಾಗೆ ಪುರ್ಸೆ ನಲ್ಲಿ ಇದ್ದ ೫ ಸಾವಿರ ವನ್ನು ಪೂರ್ತಿಯಾಗಿ ಕೊಟ್ಟು ಬಿಟ್ಟು ಅಲ್ಲಿಂದ ಹೊರಟೆವು.ನಮಗೆ ಗೊತ್ಹಿಲ್ಲದಂಗೆ ಮನೆ ತಲುಪಿದೆವು.ಮನಸ್ಸು ಮಾತ್ರ ಇನ್ನು ಆ ಗುಹೆಯಲ್ಲಿಯೇ ಇತ್ತು.

Tuesday, June 1, 2010

ಮನಸ್ಸಿನ ದಿನ

ಮನಸುಗಳ ಮಾತು ಮದುರಾ.ಮೌನವೇ ಆಭರಣ.ಯಾಕೋ ಸುಮ್ಸುಮ್ನೆ ಒಂದೊಂದು ದಿನ ಮಾತೀ ಬೇಡ ಅನಿಸಿಬಿಡತೆ.ಯಾಕೋ ಗೊತ್ತಿಲ್ಲ ಅವತ್ತು ಬೆಳಗ್ಗೆ ಏಳೋವಾಗ್ಲೆ ಹಾಗನಿಸಿರತ್ತೆ .ಕಾರಣವೇ ಇಲ್ಲದೆ ಯಾರಜೋತೆಗೂ ಮಾತು ಬೇಡ ಅನ್ಸತ್ತೆ .ಯಾರು ಬೇಡ ಏನೂ ಬೇಡ ಒಬ್ಬಳೇ ಇರ್ಬೇಕು ಅನ್ಸತ್ತೆ.ಬರೀ ಯೋಚನೆಗಳೇ.ಮನೆಯಲ್ಲಿ ಎಲ್ಲರಿಗೂ ಆಶ್ಚರ್ಯ ಯಾಕೆ ಹೀಗೆ ಅಂತ.ನೆನ್ನೆ ಚೆನ್ನಗಿದ್ದಳು ಇವತ್ತು ಏನ್ ಆಯಿತು ಅಂತ.ಅದಕ್ಕೆ ಕಾರಣ ನಮಗೇ ಗೊತ್ತಿರೋದಿಲ್ಲ.ಅವತ್ತು ಪೂರ್ತಿ ದಿನ ನಾವು ನಮ್ಮ ಜೊತೆಗೆ ಇರ್ತೀವಿ.ನಮ್ಮ ಮನಸನ್ನು ತಿಳಿಯೋ ದಿನ ಅದು.ಅದು ಹೇಗೆಲ್ಲ ಯೋಚನೆ ಮಾಡುತ್ತೆ ಅಂತಃ ಗೊತ್ತಾಗುತ್ತೆ.ಬೇರೆ ದಿನಗಲ್ಲಾದ್ರೆ ಬರಿ ಅವರ ಇವರ ವಿಷ್ಯ ಗಳನ್ನ ಯೋಚಿಸಿ ಯೋಚಿಸಿ ಮನಸಿಗೆ ಏನ್ ಬೇಕು ಅನ್ನೋದೇ ಮರೆತು ಹೋಗಿರತ್ತೆ.ಆ ದಿನ ಮನಸ್ಸಿನ ದಿನ.ಅದರ ಆಸೆ,ಯೋಚನೆ,ಇಷ್ಟ,ಕಷ್ಟ ಎಲ್ಲಾ ತಿಳಿಯೋ ದಿನ.ಅದು ಮನಸ್ಸೇ ತಂದುಕೊಳ್ಳುವ ದಿನನ ಅಂತ ಗೊತ್ತಿಲ್ಲ.ಆದರೂ ಅದು ತನ್ನನ್ನು ನೆನಪಿಸುತ್ತೆ ಅವತ್ತು.

ಸುಳ್ಳು ಮುಳ್ಳು ಅಲ್ಲ

ಸುಳ್ಳು ಮತ್ತು ಸತ್ಯ ಇವುಗಳ ಮದ್ಯ ಇರುವ ವ್ಯತಾಸ ಏನು ಅಂತ ಕೇಳಿದ್ರೆ ಹೇಳೋದು ತುಂಬ ಕಷ್ಟ.ಸುಳ್ಳೂ ಕೂಡ ಸತ್ಯದಷ್ಟೆ ಮಹತ್ವವಾದದ್ದು.ಎಷ್ಟೂ ಬಾರಿ ಸುಳ್ಳು ಹೇಳುವುದು ತುಂಬ ಅನಿವಾರ್ಯ ಆಗಿರತ್ತೆ.ಮನುಷ್ಯ ಅಂದಮೇಲೆ ಸುಳ್ಳು ತಟವಟ ಎಲ್ಲಾ ಇರ್ಲೇಬೇಕು.ಓ ಬ್ಬ ಸಾಯುವ ಸ್ಥಿತಿಯಲ್ಲಿರುವ ಮನಿಷ್ಯನಿಗೆ ನೀನು ಇನ್ನು ಬದುಕಿರಲು ಸಾದ್ಯಾನೆ ಇಲ್ಲ ಇವತ್ತೇ ಸೈಥೀಯ ಅಂತ ಹೇಳೋಕಾಗತ್ತ?ಜೀವ ಉಳಿಸುವ ವೈದ್ಯನಾಗಿ ಅವನಿಗೆ ಗೊತ್ತಿದ್ದೂ ಅದು ಸುಳ್ಳು ಅಂತ ಒಬ್ಬ ಮನುಷ್ಯನಿಗೆ ಅವನು ಸುಳ್ಳು ಹೇಳುತ್ತಾನೆ ಏನೂ ಆಗೋದಿಲ್ಲ ಎಲ್ಲಾ ಸರಿಯಾಗತ್ತೆ ಅಂತ. ಅದು ಸುಳ್ಳು ಅನ್ನುವ ಬದಲು ಸಾಂತ್ವಾನ ಅಂತ ಅನ್ನಬೋಹುದೋ ಏನೋ. ಒಬ್ಬ ಜ್ಯೋತಿಷಿ ಬಂದ ಗಿರಾಕಿಗಳಿಗೆ ಹೇಳುವ ಸುಳ್ಳು ಕೂಡ ಚೆನ್ನ ಅಲ್ವಾ.ಅವರು ನಾಳೆಯ ಒಂದು ಆಸೆಯೊಂದಿಗೆ ಹೊರ ಹೋಗುತ್ತಾರೆ .ಅದು ಆಗತ್ತೊ ಇಲ್ವೂ ಬೇರೆ ವಿಷಯ.ಆದರೂ ಆಗಿನ ಗಿರಾಕಿಗಳ ಮನಸ್ಸಿನ ಖುಷಿ ಜ್ಯೋತಿಶಿಯ ಸುಳ್ಳಿಂದ ಸಿಗ್ತು.ಅದಕ್ಕೆ ಸುಳ್ಳಿಗೂ ಬೆಲೆ ಇದೆ ಅಂದಿದ್ದ್ದು.

ಗೆಳತೀ ಓ ಗೆಳತೀ

ಎಷ್ಟೊಂದು ಮಾತುಗಳು ಹೊರಗೆ ಬರದೆ ಉಳಿದು ಹೋಗತ್ತೆ ಅಲ್ವಾ? ಅಂಥಹದ್ದನೆಲ್ಲ ಬರೆದಿಡುವುದು ನನ್ನ ಅಭ್ಯಾಸ .ಬರೆದು ಇಡುವುದು ಅಂದರೆ ಮನೆಯಲ್ಲಿ ಅಲ್ಲ.ಅದು ಯಾವಾಗ್ಲೂ ನನ್ನ ಜೊತೆ ಜೊತೆ ಗೆ ನನ್ನ ಬ್ಯಾಗ್ ನಲ್ಲೇ ಇರತ್ತೆ .ಸ್ವಲ್ಪ ಹಳೆಯದು ಆದ ಮೇಲೆ ನಾನೇ ಹರಿದು ಹಾಕ್ತೀನಿ.ಮುಂದೆ ಅದೇ ಮತ್ತೆ ಅದೇ ಕಥೆ.ಮನೆನಲ್ಲಿ ಇಟ್ರೆ ಯಾರಾದ್ರು ಆಕಸ್ಮಾತ್ ಓದಿ ಬಿಟ್ಟರೆ ಅಂತ ಭಯ.ಅದರಲ್ಲಿ ಏನೇನೇನೇನೋ ಬರೆದಿರ್ತೀನಿ.ಅದಕ್ಕೆ ಏನೋ ಅದನ್ನ ಪರ್ಸನಲ್ ಡೈರಿ ಅಂತ ಹೇಳೋದು .ತುಂಬ ಖಾಸಗಿ ವಿಚಾರಗಳನ್ನು ಅದಕ್ಕೆ ಮಾತ್ರ ಹೇಳ್ಬೋದು ಅಂತ.ಒಮ್ಮೊಮ್ಮೆ ಅದನ್ನ ತೆರೆದು ನೋಡಿದ್ರೆ ನಮಗೇ ನಗು ಬರತ್ತೆ.ಹುಚ್ಹುಚಾಗಿ ಏನೇನೊ ಬರೆದಿರ್ತೀವಿ ಅಲ್ವಾ? ಬೀಜಾರದಾಗ ಗೆಳೆಯರನ್ನ ತುಂಬ ಮಿಸ್ ಮಾಡ್ಕೊಂಡಾಗ ಅದನ್ನ ಓದ್ತಾ ಇದ್ರೆ ನಮಗೇ ಗೊತ್ತಿಲ್ಲದಂಗೆ ಕಣ್ಣಿನಲ್ಲಿ ನೀರು ಸುರಿಯುತಲಿರತ್ತೆ .ಅದೆಷ್ಟೋ ರಹಸ್ಯ ಗಳನ್ನ ಅದು ಅಡಗಿರಸತ್ತೆ. ನಮ್ಮ ಮುದ್ದಿನ ಗೆಳತಿ/ಗೆಳೆಯ ಆಗಿರತ್ತೆ.ಯಾವ್ದಕ್ಕೂ ಕೋಪಿಸಿಕೊಳ್ಳದೆ ಬೈದರೂ, ಹೊಡೆದರೂ ಸುಮ್ಮನೆ ಇರತ್ತೆ ಅದಕ್ಕೆ ಹೇಳೋದು ಅದನ್ನ ನಮ್ಮ ನಿಜವಾದ ಸಂಗಾತಿ ಅಂತ.ಸುಮ್ಮನೆ ಬರೆಯೋದನ್ನ ಅಭ್ಯಾಸ ಮಾಡಿಕೊಂಡು ನೋಡಿ ನಿಮಗೇ ಅದರ ಖುಷಿ ಗೊತಾಗತ್ತೆ .ಅದರ ಮಜಾನೆ ಬೇರೆ .ಬರೀತೀರ ಅಲ್ವಾ?

Wednesday, May 26, 2010

ಅಮ್ಮ ಅಮ್ಮ ಅಮ್ಮ

ಅಮ್ಮ ಎಷ್ಟೊಂದು ಒಳ್ಳೆಯ ಪದ ಅಲ್ವಾ.. ಎಲ್ಲಾ ಭಾಷೇಲೂ 'ಮಾ' ಅನ್ನೋ ಅಕ್ಷರ ಇದ್ದೆ ಇರತ್ತೆ ಗೊತ್ತ?..ಹ್ಮ್ಮ್ 'ಮ' ಅಂದ್ರೆ 'ಮಮತೆಯ ಮಹಾಪೂರ ,' ಮ' ಅಂದ್ರೆ 'ಮೃದುಲ ಮನೋಹರ' ,'ಮ' ಅಂದ್ರೆ ಮಂದಸ್ಮಿತೆಯಾ ಇನ್ನೊಂದು ಹೆಸರು,' ಮ' ಅಂದ್ರೆ ದೇವರ 'ಮಹತ್ಹರ' ಕೊಡುಗೆ ,'ಮ' ಅಂದ್ರೆ ಬೆಚನ್ನೆಯ 'ಮಡಿಲು', 'ಮ' ಅಂದ್ರೆ 'ಮುದ್ದು' ಮುಖದ ದೇವತೆ,'ಮ' ಅಂದ್ರೆ 'ಮಹಾ ಶಕ್ತಿ'.......ಬರೀತಾ ಇದ್ರೆ ಪದಗಳೇ ಸಾಲೋದಿಲ್ಲ.ನಿಜವಾಗಿಯೂ ಅಮ್ಮ ಅಂಥವಳು.ತನ್ನದೇನು ತನ್ನದಲ್ಲ ತನ್ನ ಮಕ್ಕಳದು ಅನ್ನೋ ನಿಸ್ವಾರ್ತಿ!!ಸ್ವಲ್ಪವೂ ಬೇಜಾರಿಲ್ಲದೆ ಎಲ್ಲವನ್ನೂ ಎಲ್ಲರಿಗೂ ಮಾಡುತ್ತಾಳೆ.ನಿಜ ದೇವರು ಎಲ್ಲ ಕಡೆ ಇರಲಾರದಕ್ಕೆ ಅಮ್ಮನನ್ನು ಸೃಷ್ಠಿ ಮಾಡಿದನು. ಅವಳಿಗೆ ಮಾತ್ರ ಹೇಗೆ ಎಲ್ಲಾ ಕಷ್ಟ ದುಃಖ ದುಮ್ಮಾನಗಳು ಅರ್ಥ ಆಗತ್ತೋ ಗೊತ್ತಿಲ್ಲ.ಎಲ್ಲರಿಗೂ ಮೀರಿದ ಒಂದು ಶಕ್ತಿ ಅಮ್ಮನಾದವಳಿಗೆ ತಂತಾನೆ ಬಂದು ಬಿಡತ್ತೆ.ನೆನ್ನೆವರೆಗೂ ಸಾಮಾನ್ಯಳಂತೆ ಇದ್ದವಳೂ ಕೂಡ ಅಮ್ಮ ಅಂತ ಗೊತ್ತಾದ ತಕ್ಷಣ ತುಂಬ ಚೇಂಜ್ ಆಗಿ ಬಿಡ್ತಾಳೆ ಅದು ಹೀಗೋ ಗೊತ್ತಿಲ್ಲ.ಅದು ಅವಳ ಮಹತ್ವ ಅನ್ಸತ್ತೆ.ಇಂಥಹ ಅಮ್ಮ ಪ್ರಪಂಚದ ಪ್ರತೀ ಒಬ್ಬ ಮನುಷ್ಯನಿಗೂ ಪ್ರಾಣಿ ಪಕ್ಷಿಗಳಿಗೂ ಇರ್ತಾಳೆ.ಅವಳನ್ನ ನಾವು ಅರ್ಥ ಮಾಡ್ಕೊಬೇಕು ಅಷ್ಟೇ .ಕೆಟ್ಟ ಅಮ್ಮ ಇರೋಕೆ ಸಾದ್ಯನೇ ಇಲ್ಲ ಅನ್ನೋದು ಎಷ್ಟು ಸತ್ಯ ಅಲ್ವಾ?ಅಂಥಹ ಅಮ್ಮನಿಗೆ ಒಂದು ಪ್ರಣಾಮ.